ಶಾಲಾ ಕಾಲೇಜುಗಳ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದ ಕೇಂದ್ರ ಸರ್ಕಾರ

0
320
Tap to know MORE!

ಮಾರ್ಚ್ ತಿಂಗಳಲ್ಲಿ ಮುಚ್ಚಲ್ಪಟ್ಟ ಶಾಲಾ ಕಾಲೇಜುಗಳು ಸೆಪ್ಟೆಂಬರ್ 1 ರಿಂದ ತೆರೆಯಬಹುದು ಎಂದು ಹೇಳಿದ್ದ ವರದಿಗಳನ್ನು ನರೇಂದ್ರ ಮೋದಿ ಸರಕಾರ ತಿರಸ್ಕರಿಸಿದೆ. ಸಾಂಕ್ರಾಮಿಕ ರೋಗದ ಪರಿಸ್ಥಿತಿ ಮತ್ತು ಸ್ಥಳೀಯ ಹರಡುವಿಕೆಯನ್ನು ನಿರ್ಣಯಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.

ಹೈಲೈಟ್ಸ್

● ಬಡ ವಿದ್ಯಾರ್ಥಿಗಳಿಗೆ ಟ್ರಾಂಸಿಸ್ಟರ್ (ರೇಡಿಯೋ ತರಹ) ವಿತರಣೆ
● ಪದವಿ ವಿದ್ಯಾರ್ಥಿಗಳಿಗಾಗಿ “ಕೊಷನ್ ಬ್ಯಾಂಕ್” (ಪ್ರಮುಖ ಪ್ರಶ್ನೆಗಳ ಪಟ್ಟಿ) ತಯಾರಿಸಲು ಚಿಂತನೆ
● ಎಲ್ಲಾ ವಿದ್ಯಾರ್ಥಿಗಳಿಗೂ ವರ್ಷಾಂತ್ಯದಲ್ಲಿ ಪರೀಕ್ಷೆ (ಶೂನ್ಯ ವರ್ಷ ಎಂದು ಪರಿಗಣಿಸಲಾಗುವುದಿಲ್ಲ)
● 8ನೇ ತರಗತಿಯಿಂದ ಕಡ್ಡಾಯ ಆನ್ಲೈನ್ ತರಗತಿ
● 4 ರಿಂದ 7ನೇ ತರಗತಿಗಳಿಗೆ ಕೆಲವು ನಿಬಂಧನೆಗಳು

ಇದನ್ನೂ ಓದಿ : ಪರೀಕ್ಷೆಗೆ ಓದುವುದನ್ನು ನಿಲ್ಲಿಸಬೇಡಿ – ಯುಜಿಸಿ

ದೇಶದಲ್ಲಿ 44,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಕೊರೊನಾ ದಿನೇ ದಿನೇ ಹೆಚ್ಚಾಗಿ ವ್ಯಾಪಿಸುತ್ತಿರುವುದರಿಂದ ಈ ವರ್ಷದ ಕೊನೆಯ ವರೆಗೆ ಶಾಲಾ ಕಾಲೇಜುಗಳನ್ನು ತೆರೆಯುವುದು ಕಷ್ಟವೆಂದು ಹೇಳಿದೆ. ಒಂದನೇ ತರಗತಿಯಿಂದಲೇ ಮಕ್ಕಳಿಗೆ ಆನ್ಲೈನ್ ತರಗತಿ ಅವಶ್ಯವಿರುವುದರಿಂದ ಸಮುದಾಯ ರೇಡಿಯೋ ಮೂಲಕ ಕಲಿಕೆಗೆ ಅವಕಾಶ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಟ್ರಾನ್ಸಿಸ್ಟರ್ ವಿತರಿಸಲಾಗುವುದು ಎಂದು ಸರಕಾರ ಭರವಸೆ ನೀಡಿದೆ.

ಆದರೆ, ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಶೂನ್ಯ ವರ್ಷವೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರಿಂದ 2020ರ ಕೊನೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು. ವಿದ್ಯಾರ್ಥಿಗಳು ತರಗತಿಯನ್ನು ಆನ್ಲೈನ್ ಅಥವಾ ಆಫ್ ಲೈನ್ ಮುಖೇನ ಪಡೆದುಕೊಳ್ಳುತ್ತಾರೆ ಹಾಗೂ ಪರೀಕ್ಷೆಗಳು ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವ್ಯವಸ್ಥಾಪನಾ ಬೆಂಬಲವನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ ತಿಳಿಸಿದರು.

ಇವೆಲ್ಲವೂ, ಯಾವಾಗ, ಹೇಗೆ ಜಾರಿಗೆ ಬರಲಿದೆ ಎಂದು ಇನ್ನಷ್ಟೇ ತಿಳಿದು ಬರಲಿದೆ.

LEAVE A REPLY

Please enter your comment!
Please enter your name here