ಶಾಹೀನ್ ಬಾಗ್‌ನ 100ಕ್ಕೂ ಅಧಿಕ ಮುಸ್ಲಿಮರು ಬಿಜೆಪಿ ಸೇರ್ಪಡೆ

0
440
Tap to know MORE!

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ತಿಂಗಳುಗಳಿಂದ ಭಾರಿ ಪ್ರತಿಭಟನೆ ನಡೆಸುತ್ತಿದ್ದ ಶಾಹೀನ್ ಬಾಗ್‌ನ ಹಲವಾರು ಮುಸ್ಲಿಂ ನಿವಾಸಿಗಳು ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಪಕ್ಷವು ಹೇಳಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಮತ್ತು ನಾಯಕ ಶ್ಯಾಮ್ ಜಾಜು ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಶಹೀನ್ ಬಾಗ್‌ನ ಸಾಮಾಜಿಕ ಕಾರ್ಯಕರ್ತ ಮತ್ತು ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಹಜಾದ್ ಅಲಿಯೂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. “ಬಿಜೆಪಿ ನಮ್ಮ ಶತ್ರು ಎಂದು ಭಾವಿಸುವ ನಮ್ಮ ಸಮುದಾಯದವರನ್ನು ತಪ್ಪು ಎಂದು ಸಾಬೀತುಪಡಿಸಲು ನಾನು ಬಿಜೆಪಿ ಸೇರಿಕೊಂಡಿದ್ದೇನೆ. ಸಿಎಎ ಬಗ್ಗೆ ನಾವು ಅವರೊಂದಿಗೆ ಒಟ್ಟಾಗಿ ಕುಳಿತು ಚರ್ತಿಸುತ್ತೇವೆ ” ಎಂದು ಶಹಜಾದ್ ಅಲಿ ಹೇಳಿದ್ದಾರೆ.

ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಅವರು, ಸಮಾಜದ ಪ್ರತಿಯೊಂದು ವರ್ಗವನ್ನು ತಲುಪಲು ಮತ್ತು ತ್ರಿವಳಿ ತಲಾಖ್ ಅನ್ನು ಕೊನೆಗೊಳಿಸುವ ಪ್ರಧಾನಮಂತ್ರಿಯ ಪ್ರಯತ್ನವನ್ನು ಬೆಂಬಲಿಸುತ್ತಿರುವುದರಿಂದ ಮುಸ್ಲಿಂ ಸಮುದಾಯದ 100 ಕ್ಕೂ ಹೆಚ್ಚು ಜನರು ಪಕ್ಷಕ್ಕೆ ಸೇರಿದ್ದಾರೆ ಎಂದಿದ್ದಾರೆ. “ಈ ಜನರು, ಎಲ್ಲರನ್ನೂ ತಲುಪುವ ಬಿಜೆಪಿಯ ಪ್ರಯತ್ನದಿಂದ ಪ್ರಭಾವಿತವಾಗಿದ್ದಾರೆ. ಅವುಗಳನ್ನು ಮತ ಬ್ಯಾಂಕ್ ಆಗಿ ಬಳಸಬೇಡಿ. ಇಂದಿನ ಈ ಘಟನೆಯು, ಪಕ್ಷದಲ್ಲಿ ಇರುವ ಮುಸ್ಲಿಮರ ನಂಬಿಕೆ ಇನ್ನೂ ಹೆಚ್ಚಾಗಿಸಿದೆ ಎಂದು ತೋರಿಸುತ್ತದೆ. ” ಎಂದರು.

LEAVE A REPLY

Please enter your comment!
Please enter your name here