ಕರ್ನಾಟಕ ಸರಕಾರದ ಆರೋಗ್ಯ ಸಚಿವ ಶ್ರೀರಾಮುಲು ಅವರ ತಾಯಿ ನಿನ್ನೆ ತಡರಾತ್ರಿ ವಯೋಸಹಜ ಕಾರಣಗಳಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಶ್ರೀರಾಮುಲು ಹಾಗೂ ಅವರ ತಾಯಿ ಹೊನ್ನೂರಮ್ಮ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇತ್ತೀಚಿಗಷ್ಟೇ ಸೋಂಕಿನಿಂದ ಗುಣಮುಖರಾಗಿದ್ದರು.
ವಯಸ್ಸು ನೂರು ಸಮೀಪಿಸಿದ್ದರೂ ಅವರು ಕೊರೋನಾ ಸೋಂಕಿನ ವಿರುದ್ಧ ಹೋರಾಡಿ ಸಂಪೂರ್ಣ ಗುಣಮುಖರಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಹೊನ್ನೂರಮ್ಮ ಬಳ್ಳಾರಿಯ ಮನೆಯಲ್ಲಿ ವಾಸವಾಗಿದ್ದರು.
ಇಂದು ಮುಂಜಾನೆ 5:30ಕ್ಕೆ ಬಳ್ಳಾರಿಯಲ್ಲೇ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.