85 ವರ್ಷದ ಅಜ್ಜಿಗೆ ಮಾರ್ಷಲ್ ಆರ್ಟ್ ತರಬೇತಿ ಶಾಲೆಯನ್ನು ಕೊಡುಗೆಯಾಗಿ ನೀಡಿದ ಸೋನೂ ಸೂದ್

0
168
Tap to know MORE!

ಸೋನು ಸೂದ್ ಅವರು ಪುಣೆಯ ವಾರಿಯರ್ ಆಜಿ ಆಲಿಯಾಸ್ ಶಾಂತ ಪವಾರ್‌ಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸ್ವರಕ್ಷಣೆ ತಂತ್ರಗಳನ್ನು ಕಲಿಸುವ ಮಾರ್ಷಲ್ ಆರ್ಟ್ ತರಬೇತಿ ಶಾಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

85 ವರ್ಷದ ಶಾಂತಾ ಪವಾರ್, ಬೀದಿಗಳಲ್ಲಿ ಬಿದಿರಿನ ಕೋಲುಗಳಿಂದ ಸಮರ ಕಲೆಗಳ ಕೌಶಲ್ಯವನ್ನು ತೋರಿಸುತ್ತಿದ್ದ ವೀಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದೀಗ ಸೋನು ಸೂದ್ ಅವರ ಸಹಕಾರದಿಂದ, ತನ್ನ ಸ್ವಂತ ತರಬೇತಿ ಶಾಲೆಯಲ್ಲಿ ಶಿಷ್ಯರಿಗೆ ಈ.ಕಲೆಯನ್ನು ಕಲಿಸಲಿದ್ದಾರೆ “ವಾರಿಯರ್ ಆಜಿ”.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಸೋನು ಸೂದ್, ಆಜಿಗಾಗಿ ಸಮರ ಕಲಾ ಶಾಲೆಯನ್ನು ಕೊಡುಗೆಯಾಗಿ ನೀಡಿದರು. “ನನ್ನ ಈ ಕನಸನ್ನು ಸೋನು ಈಡೇರಿಸಿದ್ದಾನೆ. ನನ್ನ ಶಾಲೆಗೆ ಅವನ ಹೆಸರನ್ನು ಇಟ್ಟಿದ್ದೇನೆ. ನಾನು ಅವನಿಗೆ ತುಂಬಾ ಕೃತಜ್ಞಳಾಗಿದ್ದೇನೆ” ಎಂದು ಆಜಿ ವೀಡಿಯೊವೊಂದರಲ್ಲಿ ತಿಳಿಸಿದ್ದಾರೆ.

ತರಬೇತಿ ಶಾಲೆಯಲ್ಲಿ ಆಜಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳಿಗೆ ಸ್ವರಕ್ಷಣೆ ತಂತ್ರಗಳನ್ನು ಕಲಿಸಲಿದ್ದಾರೆ.

LEAVE A REPLY

Please enter your comment!
Please enter your name here