ಎಸ್‌ಪಿ‌ಬಿ ಆರೋಗ್ಯದಲ್ಲಿ ಚೇತರಿಕೆ – ಮಗ ಎಸ್‌ಪಿ ಚರಣ್

0
45

ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯನ್ ಗುಣಮುಖರಾಗುವ ಲಕ್ಷಣಗಳನ್ನು ತೋರಿಸುತ್ತಿದ್ದಾರೆ ಮತ್ತು ಆರೋಗ್ಯದಲ್ಲಿ ಚೇತರಿಕೆ ಕಾಣುವ ಹಾದಿಯಲ್ಲಿದ್ದಾರೆ ಎಂದು ಎಸ್‌ಪಿಬಿ ಅವರ ಪುತ್ರ ಎಸ್‌ಪಿ ಚರಣ್ ಹೇಳಿದ್ದಾರೆ. ತಾಯಿಯೂ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಮಂಗಳವಾರ ಅಥವಾ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಾರೆ ಎಂದು ಅವರು ಇದೇ ವೇಳೆ ಹೇಳಿದರು.

ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯನ್ ಅವರು ಆಗಸ್ಟ್ 5 ರಂದು ಎಂಜಿಎಂ ಆಸ್ಪತ್ರೆಯಲ್ಲಿ ಕೊರೋನ ಸೋಂಕು ಇರುವುದೀ ದೃಢಪಟ್ಟಿತ್ತು. ಅವರು ಅಂದು ಆಸ್ಪತ್ರೆಯಿಂದ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಆದರೆ, ಆಗಸ್ಟ್ 13 ರಂದು, ಅವರ ಆರೋಗ್ಯವು ಮತ್ತಷ್ಟು ಹದಗೆಟ್ಟಿತ್ತು ಮತ್ತು ಅವರಿಗೆ ವೆಂಟಿಲೇಟರ್ ಬೆಂಬಲ ನೀಡಲಾಗಿತ್ತು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿತ್ತು.

ಇದನ್ನೂ ಓದಿ : ನಾನು ಶೀಘ್ರದಲ್ಲೇ ಹಿಂದಿರುಗುತ್ತೇನೆ – ಎಸ್‌ಪಿ ಬಾಲಸುಬ್ರಹ್ಮಣ್ಯಂ

“ಅಪ್ಪನನ್ನು ಮೂರನೇ ಮಹಡಿಯ ಐಸಿಯುನಿಂದ ಆರನೇ ಮಹಡಿಯಲ್ಲಿರುವ ವಿಶೇಷ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಆಹ್ಲಾದಕರ ಸುದ್ದಿ ಏನೆಂದರೆ, ಅವರಲ್ಲಿ ಈಗ ಸ್ವಲ್ಪ ಚಲನಶೀಲತೆ ಇದೆ. ತಂದೆಯವರು ಸ್ವಲ್ಪಮಟ್ಟಿಗೆ ತಿರುಗಾಡುತ್ತಿದ್ದಾರೆ. ಅವರು ವೈದ್ಯರಿಗೆ ಥಂಬ್ಸ್ ಅಪ್ ಚಿಹ್ನೆಯನ್ನು ತೋರಿಸಿದ್ದಾರೆ. ವೈದ್ಯರನ್ನು ಅವರೇ ಗುರುತಿಸಿದ್ದಾರೆ. ಅವರು ಇನ್ನೂ ವೆಂಟಿಲೇಟರ್‌ನ ಬೆಂಬಲದಲ್ಲಿದ್ದಾರೆ. ಆದರೆ ಕೆಲವು ದಿನಗಳ ಹಿಂದೆಯಿಂಜಲೇ ಅವರು ಸ್ವಲ್ಪ ಹೆಚ್ಚು ಆರಾಮವಾಗಿ ಉಸಿರಾಡುತ್ತಿದ್ದಾರೆ” ಎಂದು ಅವರ ಮಗ ಹೇಳಿದರು.

ಎಸ್‌ಪಿಬಿಯ ಅಭಿಮಾನಿಗಳಿಗೆ, ಚರಣ್, “ವೈದ್ಯರು ಇದನ್ನು ಉತ್ತಮ ಸಂಕೇತವೆಂದು ಹೇಳಿದ್ದಾರೆ ಮತ್ತು ಅವರು ಇನ್ನಷ್ಟು ಚೇತರಿಕೆ ಕಾಣಲಿದ್ದಾರೆ. ಚೇತರಿಕೆಗೆ ಬಹಳ ಸಮಯ ತೆಗೆದುಕೊಳ್ಳುತ್ತದೆ ಆದರೆ ಎಲ್ಲವೂ ಆಶಾದಾಯಕವಾಗಿವೆ. ಇದು ಒಂದು ದಿನ ಅಥವಾ ಎರಡು ದಿನಗಳಲ್ಲಿ ಸಂಭವಿಸದೆ ಇರಬಹುದು‌. ಆದರೆ ಅವರು ಖಂಡಿತವಾಗಿಯೂ ಗುಣಮುಖನಾಗುತ್ತಾರೆ, ಚೇತರಿಸಿಕೊಳ್ಳುತ್ತಾರೆ ಮತ್ತು ಸಾಧ್ಯವಾದಷ್ಟು ಬೇಗ ಹಿಂತಿರುಗುತ್ತಾರೆ. ಅವರು ಮಾತನಾಡುವುತ್ತಿಲ್ಲ. ಆದರೆ ಜನರನ್ನು ಗುರುತಿಸುತ್ತಾರೆ‌. ಖಂಡಿತವಾಗಿಯೂ ಅವರು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here