ಜುಲೈ 19 ಮತ್ತು 22 ರಂದು SSLC ಪರೀಕ್ಷೆ ; ಮಲ್ಟಿಪಲ್ ಚಾಯ್ಸ್ ಮಾದರಿಯಲ್ಲಿ ಓಎಂಆರ್ ಶೀಟ್‌ನಲ್ಲಿ ಪರೀಕ್ಷೆ

0
110
Tap to know MORE!

ಬೆಂಗಳೂರು: ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್,”ಜುಲೈ 19 ರಂದು ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಜುಲೈ 22 ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಮಲ್ಟಿಪಲ್ ಚಾಯ್ಸ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಒಎಂಆರ್ ಶೀಟ್ ನಲ್ಲಿ ಉತ್ತರಿಸಬೇಕು ಎಂದರು.” ಎಂದರು.

8.76 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಬಾರಿ SSLC ಪರೀಕ್ಷೆ ಬರೆಯಲಿದ್ದಾರೆ. 7,306 ಪರೀಕ್ಷಾ ಕೇಂದ್ರಗಳನ್ನೂ 6 ಸ್ಥಾಪಿಸಲಾಗಿದೆ. ಪರೀಕ್ಷೆಗೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿ‌ ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಚರ್ಚಿಸಲಾಗಿದೆ.

SSLC ಪರೀಕ್ಷೆ : ದ.ಕ – ಉಡುಪಿ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಏರಿಕೆ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

“ಕಳೆದ ಬಾರಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಈ ಬಾರಿ ವಿಶೇಷ ಪರಿಸ್ಥಿತಿ ಮಧ್ಯೆ ಪರೀಕ್ಷೆ ನಡೆಸಲಾಗುತ್ತಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿದೆ. ಆರೋಗ್ಯ ಇಲಾಖೆಯ ಆಧಿಕಾರಿಗಳ ಸಲಹೆ ಪಡೆಯಲಾಗಿದೆ.‌ ವಿದ್ಯಾರ್ಥಿಗಳು ಪರೀಕ್ಷೆಗೆ ಸಕಲ‌ ಸಿದ್ದತೆ ಮಾಡಿಕೊಂಡಿದ್ದಾರೆ. ಸಮಾಜವಿಜ್ಞಾನ, ವಿಜ್ಞಾನ ಹಾಗೂ ಗಣಿತದ ಒಂದು ಪತ್ರಿಕೆ ಹಾಗೂ ಕನ್ನಡ ಹಿಂದಿ‌‌ ಇಂಗ್ಲೀಷ್ ಸೇರಿ‌ ಒಂದು ಪರೀಕ್ಷೆ ನಡೆಯಲಿದೆ “ಎಂದರು.

LEAVE A REPLY

Please enter your comment!
Please enter your name here