ಯುಜಿಸಿ ಮಾರ್ಗಸೂಚಿ : ವಿಚಾರಣೆಯನ್ನು ಮುಗಿಸಿದ ಸುಪ್ರೀಂಕೋರ್ಟ್!

0
426
Tap to know MORE!

ಯುಜಿಸಿ ಮಾರ್ಗಸೂಚಿಗಳ ವಿರುದ್ಧ ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆಗೆ ಸುಪ್ರೀಂಕೋರ್ಟ್ ಒಳಪಡಿಸಿತು. ಇಂದು ಸುಮಾರು 3 ಘಂಟೆಗಳ ಕಾಲ ಸತತವಾಗಿ, ಬೇರೆ ಬೇರೆ ಅರ್ಜಿದಾರರ ಅಭಿಪ್ರಾಯಗಳನ್ನು ಆಲಿಸಿತು‌ ಕಡೆಗೆ, ಯಾವುದೇ ನಿರ್ಧಾರವನ್ನೂ ಪ್ರಕಟಿಸದ ನ್ಯಾಯಾಲಯ, ಎಲ್ಲಾ ಪಕ್ಷಗಳು ಪರೀಕ್ಷೆ ನಡೆಸುವ ಬಗ್ಗೆ ತಮ್ಮ ಲಿಖಿತ ಸಲ್ಲಿಕೆಗಳು ಯಾವುದಾದರೂ ಇದ್ದರೆ, 3 ದಿನಗಳ ಅವಧಿಯಲ್ಲಿ ಸಲ್ಲಿಸುವಂತೆ ಕೇಳಿದೆ. ಅದಲ್ಲದೆ ಯಾವುದೇ ಮಧ್ಯಸ್ಥಿಕೆಗಳಿಗೆ ಅನುಮತಿ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸುತ್ತದೆ. ಹೀಗಾಗಿ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.

ಇದನ್ನೂ ಓದಿ : ನಿಗದಿಯಂತೆ ನಡೆಯಲಿದೆ ಜೆಇಇ – ನೀಟ್ ಪರೀಕ್ಷೆ – ಮುಂದೂಡದ ಸುಪ್ರೀಂಕೋರ್ಟ್

ಇಂದಿನ ವಾದವೊಂದರಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿಶ್ವವಿದ್ಯಾನಿಲಯಗಳು ಗಡುವನ್ನು ಮುಂದೂಡಲು ಪ್ರಯತ್ನಿಸಬಹುದು ಎಂದು ಹೇಳಿದರು. ಆದರೆ, ಪರೀಕ್ಷೆಗಳನ್ನು ನಡೆಸದೆ ಪದವಿಗಳನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

LEAVE A REPLY

Please enter your comment!
Please enter your name here