ಸ್ವಚ್ಛ ಸರ್ವೇಕ್ಷಣ 2020 : ಇಂದೋರ್‌ ಭಾರತದ ಸ್ವಚ್ಛ ನಗರ

0
222
Tap to know MORE!

ಸ್ವಚ್ಛತೆಯ ವಾರ್ಷಿಕ ಸಮೀಕ್ಷೆಯ ಫಲಿತಾಂಶಗಳನ್ನು ಸರ್ಕಾರ ಇಂದು ಪ್ರಕಟಿಸಿದೆ. ಸ್ವಚ್ಛಸರ್ವೇಕ್ಷನ್ 2020 ಯಲ್ಲಿ ಮಧ್ಯಪ್ರದೇಶದ ಇಂದೋರ್ ನಗರವು ಮತ್ತೊಮ್ಮೆ ಭಾರತದ ಸ್ವಚ್ಛ ನಗರವೆಂದು ಗುರುತಿಸಿಕೊಂಡಿದೆ. ಈ ಮೂಲಕ ಅಗ್ರ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಇಂದೋರ್‌ ನಗರವು ಸತತ ನಾಲ್ಕನೇ ಬಾರಿಗೆ ಮೊದಲ ಸ್ಥಾನಗಳಿಸಿದೆ. ಎರಡನೇ ಸ್ಥಾನದಲ್ಲಿ ಗುಜರಾತ್‌ನ ಸೂರತ್ ಮತ್ತು ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರದ ನವೀ ಮುಂಬೈ ನಗರವಿದೆ

“ನಾನು ಜಪಾನಿನ ನಿಯೋಗದ ಸದಸ್ಯರೊಂದಿಗೆ ಕೆಲವು ವರ್ಷಗಳ ಹಿಂದೆ ಇಂದೋರ್‌ಗೆ ಭೇಟಿ ನೀಡಿದ್ದೆ. ನಾವು ನಗರವನ್ನು ತಲುಪಿದಾಗ, ಅವರು ಜಪಾನಿಯರು ಇಂದೋರ್‌ನ ವಿವಿಧ ಸ್ಥಳಗಳಿಗೆ ಹೋಗುವುದನ್ನು ನಾನು ನೋಡಿದೆ. ನಾನು ಅವರನ್ನು ಕೇಳಿದೆ ‘ನೀವು ಏನು ಮಾಡುತ್ತಿದ್ದೀರಿ?’ ಅವರು ‘ನಾನು ಹೊಲಸು ಹುಡುಕಲು ಪ್ರಯತ್ನಿಸುತ್ತಿದ್ದೇನೆ, ಆದರೆ ಸಾಧ್ಯವಾಗಲಿಲ್ಲ ಎಂದರು”ಎಂದು ಕೇಂದ್ರ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು . “ನಗರದ ಸಾಧನೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೆ ಇರಬಹುದೆಂದು ನಾನು ಭಾವಿಸುವುದಿಲ್ಲ” ಎಂದರು.

ಪ್ರಧಾನಿ ಮೋದಿ ಅವರು 2016 ರ ಜನವರಿಯಲ್ಲಿ ಪರಿಚಯಿಸಿದ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯ ಐದನೇ ಆವೃತ್ತಿ ಇದು.

ದೇಶದ 4,242 ನಗರಗಳು, 62 ಕಂಟೋನ್ಮೆಂಟ್ ಬೋರ್ಡ್ಗಳು ಮತ್ತು 92 ಪಟ್ಟಣಗಳು ಸ್ವಚ್ಛ ಸರ್ವೇಕ್ಷಣ 2020 ಯಲ್ಲಿ ಒಳಗೊಂಡಿದೆ. ಈ ಸಮೀಕ್ಷೆಯನ್ನು 28 ದಿನಗಳಲ್ಲಿ ನಡೆಸಲಾಯಿತು.

ಸಮೀಕ್ಷೆಯ ಮೊದಲ ಆವೃತ್ತಿಯಲ್ಲಿ ರಾಜ್ಯದ ಮೈಸೂರು ನಗರವು ಭಾರತದ ಸ್ವಚ್ಛ ನಗರಕ್ಕಾಗಿ ಪ್ರಶಸ್ತಿಯನ್ನು ಗೆದ್ದಿತ್ತು. ಬಳಿಕದ ಮೂರು ವರ್ಷಗಳೂ (2017,2018, 2019) ಸಹ ಮಧ್ಯಪ್ರದೇಶದ ಇಂದೋರ್‌ ಪಾಲಾಗಿತ್ತು. ಈ ಬಾರಿಯೂ, ನಗರವು ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.

ಸ್ವಚ್ಛ ಸರ್ವೇಕ್ಷಣದ ಪ್ರಮುಖಾಂಶಗಳು

-ಮಧ್ಯಪ್ರದೇಶದ ಇಂದೋರ್ ಸತತವಾಗಿ ನಾಲ್ಕನೇ ವರ್ಷವೂ ಸ್ವಚ್ಛ ನಗರ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

-ಛತ್ತೀಸ್‌ಗಢ ದೇಶದ ಅತ್ಯಂತ ಸ್ವಚ್ಛ ರಾಜ್ಯ ಎನ್ನು ಖ್ಯಾತಿ ಪಡೆದಿದೆ

-ಬೃಹತ್ ಬೆಂಗಳೂರು ನಗರವು 10 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ನಗರಗಳ ಪೈಕಿ 37ನೇ ಸ್ಥಾನ ಪಡೆದಿದ್ದು, ರಾಜ್ಯದ ಟಾಪ್ ನಗರವಾಗಿದೆ.

-ಗುಜರಾತಿನ ಸೂರತ್ ಎರಡನೆಯ ಅತಿ ಸ್ವಚ್ಛ ನಗರ

-ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ವಚ್ಛನಗರ

-ಅಹಮದಾಬಾದ್ ಭಾರತದ ಅತ್ಯಂತ ಸ್ವಚ್ಛ ಮೆಗಾ ಸಿಟಿ

-ಮೆಗಾ ಸಿಟಿ ವಿಭಾಗದಲ್ಲಿ ಬೆಂಗಳೂರು ಅತ್ಯುತ್ತಮ ಸ್ವಯಂ ಸುಸ್ಥಿರತೆ ಪ್ರಶಸ್ತಿಯನ್ನು ಗೆದ್ದಿದೆ.

-1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಕರದ್ ಸ್ವಚ್ಛ ನಗರವಾಗದೆ.

LEAVE A REPLY

Please enter your comment!
Please enter your name here