ತಲಕಾವೇರಿ : ಅರ್ಚಕ ನಾರಾಯಣ್ ಆಚಾರ್ ಮೃತದೇಹ ಪತ್ತೆ!

0
62

ಬ್ರಹ್ಮಗಿರಿ ಬೆಟ್ಟದಲ್ಲಿ ನಡೆದ ಅವಘಡದಲ್ಲಿ ಸಿಲುಕಿದ ಅರ್ಚಕ ಕುಟುಂಬದ ನಾರಾಯಣ್ ಆಚಾರ್ ಅವರ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಅವರ ಸಹೋದರನ ಮೃತದೇಹ ದೊರೆತಿದ್ದು ಉಳಿದವರ ಪತ್ತೆಗಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದರು.

ಭಾಗಮಂಡಲದಲ್ಲಿ ಗುಡ್ಡ ಕುಸಿತ – ಐವರು ನಾಪತ್ತೆ

ಸತತ ಆರು ದಿನಗಳ ಕಾರ್ಯಾಚರಣೆ ಬಳಿಕ ನಾರಾಯಣ್ ಆಚಾರ್ ಅವರ ಮೃತದೇಹ ಬ್ರಹ್ಮಗಿರಿ ಬೆಟ್ಟದಿಂದ 2 ಕಿಮೀ ಆಳದಲ್ಲಿ ದೊರೆತಿದೆ. ಅರ್ಚಕರ ಕಾರು ಮಣ್ಣಿನಡಿಯಲ್ಲಿ 60 ಅಡಿ ಕೆಳಗೆ ಪತ್ತೆಯಾಗಿದೆ. ಇಂದು ಬೆಳಿಗ್ಗೆ 2 ಕಾರು ಹಾಗೂ ಬೈಕ್ ಸಿಕ್ಕಿವೆ. ಇನ್ನುಳಿದ ಮೂವರಿಗಾಗಿ ಎನ್ ಡಿಆರ್ ಎಫ್ ತಂಡದಿಂದ ಶೋಧ ಕಾರ್ಯ ಮುಂದುವರಿದಿದೆ

LEAVE A REPLY

Please enter your comment!
Please enter your name here