ದ.ಕ ಜಿಲ್ಲೆಯಲ್ಲಿ ₹500 ಕೋಟಿ ಹೂಡಿಕೆ ಮಾಡಲಿದೆ ಟಾಟಾ!

0
6096
Tap to know MORE!

ಮಂಗಳೂರು : ದೇಶದ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಾರ್ನಾಡ್‌ನಲ್ಲಿ ವಿಶಾಲವಾದ ಕಚೇರಿಯನ್ನು ತೆರೆಯಲು ಯೋಜಿಸುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ 38 ಎಕರೆ ಪ್ರದೇಶದಲ್ಲಿ ಟಿಸಿಎಸ್ ತನ್ನ ಕ್ಯಾಂಪಸ್ ತೆರೆಯಲಿದೆ. ಇದನ್ನು ಸಂಪೂರ್ಣವಾಗಿ ತೆರೆದ ನಂತರ 4,000 ಕ್ಕೂ ಹೆಚ್ಚು ಜನರು ಉದ್ಯೋಗ ಪಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ : ಸೋಂಕು ಹರಡುವುದನ್ನು ತಡೆಗಟ್ಟಲು ದ.ಕ ಜಿಲ್ಲೆಯಲ್ಲಿ ಸಾಮುದಾಯಿಕ ಕಾರ್ಯಪಡೆ ಸಿದ್ಧ : ಜಿಲ್ಲಾಧಿಕಾರಿ

“ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತುಳುನಾಡಿನಲ್ಲಿ 500 ಕೋಟಿ ರೂ. ಹೂಡಿಕೆ ಮಾಡಲಿದೆ. ಇದು ಸುಮಾರು 4,500 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದು ಯಾವಾಗ ಕಾರ್ಯರೂಪಕ್ಕೆ ಬರಬಹುದು ಮತ್ತು ಅದು ಯಾವಾಗ ಕಾರ್ಯಗತಗೊಳ್ಳುತ್ತದೆ ಎಂಬುದನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಟ್ವೀಟ್ ಮಾಡಿದ್ದಾರೆ”

ರಾಜ್ಯಾದ್ಯಂತ ಹೆಚ್ಚುತ್ತಿದೆ ಹೂಡಿಕೆ!

ಈ ವರ್ಷ, ಮಾರ್ಚ್‌ ತಿಂಗಳಿಂದ‌ 27,107.39 ಕೋಟಿ ರೂ.ಗಳ ಬಂಡವಾಳವನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲಾಗಿದೆ. ಅವುಗಳಲ್ಲಿ 37 ಯೋಜನೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ಅನುಮೋದನೆ ನೀಡಿದೆ. ಈ ಯೋಜನೆಗಳು ರಾಜ್ಯದಲ್ಲಿ ಸುಮಾರು 46,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

6,136.97 ಕೋಟಿ ಮೌಲ್ಯದ 85 ಯೋಜನೆಗಳು 31,648 ಉದ್ಯೋಗಗಳನ್ನು ಸೃಷ್ಟಿಸಲಿವೆ ಮತ್ತು 18,989.02 ಕೋಟಿ ಮೌಲ್ಯದ 16 ಯೋಜನೆಗಳಿಂದ ಇನ್ನೂ 10,000 ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ನಂಬಲಾಗಿದೆ.

ಬಳ್ಳಾರಿಯ ಜೆಎಸ್‌ಡಬ್ಲ್ಯು ವಿಜಯನಗರ ಮೆಟಾಲಿಕ್ಸ್ ಲಿಮಿಟೆಡ್ 13,026 ಕೋಟಿ ರೂ., ಸಂಶೋಧನೆ ಮತ್ತು ಪ್ರಾಯೋಗಿಕ ಅಭಿವೃದ್ಧಿ ಸೇವೆಗಳಿಗಾಗಿ ಬೆಂಗಳೂರಿನ ಸೀಮೆನ್ಸ್ ಹೆಲ್ತ್‌ಕೇರ್ 1,085.30 ಕೋಟಿ ರೂ. ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಿಸಿಎಸ್ 500 ಕೋಟಿ ರೂ.ಗಳ ಹೂಡಿಕೆಗೆ ಈಗಾಗಲೇ ಅನುಮೋದನೆ ನೀಡಿದೆ.

LEAVE A REPLY

Please enter your comment!
Please enter your name here