ಧರ್ಮದ ಉಳಿವಿಗಾಗಿ, ಹಿಂದೂಗಳೇ ಅಧಿಕಾರದಲ್ಲಿರಬೇಕು : ತೇಜಸ್ವಿ ಸೂರ್ಯ

2
547
Tap to know MORE!

ಅಯೋಧ್ಯೆಯ ಐತಿಹಾಸಿಕ ರಾಮ ಮಂದಿರದ ಶಿಲಾನ್ಯಾಸ ಸಮಾರಂಭವು ನಿನ್ನೆ ಸಂಪನ್ನಗೊಂಡಿತು. ಇದರ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ‘ಧರ್ಮದ ಉಳಿವಿಗಾಗಿ, ದೇಶದಲ್ಲಿ ಹಿಂದೂಗಳೇ ಅಧಿಕಾರದಲ್ಲಿರಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ದೇಶದ ಇತಿಹಾಸದಲ್ಲಿ ಹಿಂದೂಗಳಿಗೆ ದೇಶದ ಮೇಲೆ ಅಧಿಕಾರವಿಲ್ಲದ ಕಾರಣ, ನಾವು ಹಲವು ದೇವಾಲಯಗಳನ್ನು ಕಳೆದುಕೊಂಡೆವು. ಈಗ ಅಧಿಕಾರವನ್ನು ಮರಳಿ ಪಡೆದಾಗ, ಮಂದಿರವನ್ನು ನಾವು ಪುನರ್ನಿರ್ಮಿಸಿದ್ದೇವೆ” ಎಂದಿದ್ದಾರೆ.

ಅಯೋಧ್ಯೆಯ ರಾಮ ಮಂದಿರದ ಪುನರುತ್ಥಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೇಯ ಸಲ್ಲುತ್ತದೆ ಎಂದು ಇದೇ ವೇಳೆ ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, ಭಾರತೀಯ ತತ್ವಜ್ಞಾನಿ ಶ್ರೀ ಅರಬಿಂದೋ ಅವರು ತಮ್ಮ ಉತ್ತರಪಾರ ಭಾಷಣದಲ್ಲಿ, ಸನಾತನ ಧರ್ಮವು ರಾಷ್ಟ್ರೀಯತೆಗೆ ಸಮಾನ ಎಂದು ಉಲ್ಲೇಖಿಸಿದ್ದರು. ಧರ್ಮ ಉಳಿದುಕೊಂಡರೆ, ಭಾರತ ಉಳಿದುಕೊಳ್ಳುತ್ತದೆ” ಎಂದಿದ್ದಾರೆ.