ತೋಕೂರು: ದೌರ್ಜನ್ಯ ತಡೆಗಟ್ಟುವಿಕೆ ಮಾಹಿತಿ ಕಾರ್ಯಾಗಾರ

0
291
Tap to know MORE!

ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ ಮತ್ತು ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆಯ ಆಶ್ರಯದಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪಡುಪಣಂಬೂರು ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಯುವ ಜನ ಒಕ್ಕೂಟ, ದ. ಕ. ಜಿಲ್ಲೆ ಇವರ ಸಹಕಾರದಲ್ಲಿ ಸಮುದಾಯದಲ್ಲಾಗುವ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ ಮಾಹಿತಿ ಕಾರ್ಯಕ್ರಮವನ್ನು ಆಗಸ್ಟ್ 7 ರಂದು ನಡೆಸಲಾಯಿತು.

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಸಂಯೋಜನೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಸ್ಥೆಯ ಸಭಾಂಗಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರು ಮೋಹನದಾಸ್, ಪ್ರಜ್ಞಾ ಸಲಹಾ ಕೇಂದ್ರ ಯೋಜನಾ ಸಂಯೋಜನಾಧಿಕಾರಿಯಾದ ವಿಲಿಯಮ್ ಸ್ಯಾಮುವೆಲ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮೌನೀಶ್ ವಿಶ್ವಕರ್ಮ, ಪ್ರಜ್ಞಾ ಕೇಂದ್ರದ ಆಪ್ತ ಸಮಾಲೋಚಕರು ಆನಂದ್ ಕುಂದರ್
ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಕಾರ್ಯದರ್ಶಿ ಲೋಕನಾಥ್ ಭಂಡಾರಿ
ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು ಸಂತೋಷ್ ದೇವಾಡಿಗ
ಸ್ಪೋರ್ಟ್ಸ್ ಕ್ಲಬ್ ನ ಮಹಿಳಾ ಕಾರ್ಯಾಧ್ಯಕ್ಷೆ ವಾಣಿ ಮಹೇಶ್
ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪೋರ್ಟ್ಸ್ ಕ್ಲಬ್ ನ ಕೋಶಾಧಿಕಾರಿ ಸಂಪತ್ ದೇವಾಡಿಗ ಸ್ವಾಗತಿಸಿದರು ಪ್ರಜ್ಞಾ ಕೇಂದ್ರದ ಮೇವಿಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಸ್ಪೋರ್ಟ್ಸ್ ಕ್ಲಬ್ ನ ಮಹಿಳಾ ಕಾರ್ಯಾಧ್ಯಕ್ಷೆ ವಾಣಿ ಮಹೇಶ್ ವಂದಿಸಿದರು.

LEAVE A REPLY

Please enter your comment!
Please enter your name here