ತೋಕೂರು : ಗ್ರಾಮದ ಲಿಂಗಪ್ಪ ಸುವರ್ಣ ಇವರ ಮನೆಯಲ್ಲಿ, ತೋಕೂರಿನ ಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ, ಮಳೆ ಕೊಯ್ಲು ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ ಮತ್ತು ಅಳವಡಿಕೆ ವಿಧಾನ ಕಾರ್ಯಾಗಾರವು ಜರುಗಿತು.
ಮಾರ್ಗದರ್ಶನ :-
● ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು,
● ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮಂಗಳೂರು,
● ಗ್ರಾಮ ಪಂಚಾಯತ್ ಪಡುಪಣಂಬೂರು,
● ಜಿಲ್ಲಾ ಯುವ ಜನ ಒಕ್ಕೂಟ ದ. ಕ ಜಿಲ್ಲೆ
ನೇತೃತ್ವ ಮತ್ತು ಆಶ್ರಯ :-
● ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು, ಹಳೆಯಂಗಡಿ
● ಲಯನ್ಸ್ &ಲಿಯೋ ಕ್ಲಬ್, ಹಳೆಯಂಗಡಿ
ಭಾನುವಾರ ಬೆಳಿಗ್ಗೆ 9:45 ಕ್ಕೆ ಶ್ರೀ ಲಿಂಗಪ್ಪ ಸುವರ್ಣರವರ
“ಸುವರ್ಣ ನಿವಾಸ” ದಲ್ಲಿ 2020-21 ನೇ ಸಾಲಿನ 4 ನೇ ಹಂತದ ಕಾರ್ಯಾಗಾರವು ನಡೆಯಿತು. ಲಯನ್ ಚಂದ್ರಶೇಖರ್ ನಾನಿಲ್ ಮತ್ತು ಲಯನ್ ಯಾದವ ದೇವಾಡಿಗ ಇವರು ಮಳೆ ಕೊಯ್ಲು ಕಾರ್ಯಗಾರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಪಡುಪಣಂಬೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ
ಲೋಕನಾಥ್ ಭಂಡಾರಿ ಇವರು ಮಳೆ ಕೊಯ್ಲು ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ದೇವಾಡಿಗ ಸ್ವಾಗತಿಸಿದರು. ಲಯನ್ಸ್ ಮತ್ತು ಲಿಯೋ ಇದರ ಅಧ್ಯಕ್ಷರಾದ ಲಯನ್ ಶರತ್ ಸಾಲ್ಯಾನ್ ವಂದಿಸಿದರು.
ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಮೋಹನ್ ದಾಸ್,ಮಾಜಿ ಸದಸ್ಯರಾದ ಸಂತೋಷ್ ಕುಮಾರ್, ದಿನೇಶ್ ಕುಲಾಲ್, ಸಂಸ್ಥೆಯ ಗೌರವ ಮಾರ್ಗದರ್ಶಕರು ನರೇಂದ್ರ ಕೆರೆಕಾಡು, ಉಪಾಧ್ಯಕ್ಷ ದೀಪಕ್ ಸುವರ್ಣ, ಕಾರ್ಯದರ್ಶಿ ಜಗದೀಶ್ ಕುಲಾಲ್, ಜೊತೆ ಕಾರ್ಯದರ್ಶಿ ಗಣೇಶ್ ದೇವಾಡಿಗ, ಕಾರ್ಯಕಾರಿ ಸಮಿತಿ ಅಧ್ಯಕ್ಷರು ಸುರೇಶ್ ಶೆಟ್ಟಿ, ಮಹಿಳಾ ಸಮಿತಿ ಕಾರ್ಯಧ್ಯಕ್ಷೆ ವಾಣಿ ಮಹೇಶ್, ಲಯನ್ಸ್ & ಲಿಯೋ ಕ್ಲಬ್ ಹಳೆಯಂಗಡಿ ಇದರ ಕಾರ್ಯದರ್ಶಿ ಲಯನ್|ರಶ್ಮಿಮತ್ತು ಜಂಟಿ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದು ಕಾರ್ಯಾಗಾರದ ಪ್ರಯೋಜನವನ್ನು ಪಡೆದರು.