ಯುಜಿಸಿ ಮಾರ್ಗಸೂಚಿ : ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್!

1
198
Tap to know MORE!

ಇಂದು ಉಚ್ಚ ನ್ಯಾಯಾಲಯವು, ಯುಜಿಸಿ ಮಾರ್ಗಸೂಚಿಗಳ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿ, ಅದನ್ನು ಅಂತ್ಯಗೊಳಿಸದೆ ಮತ್ತೊಮ್ಮೆ ಮುಂದೂಡಿದೆ.

ಯುಜಿಸಿ ಪರ ವಾದ ಮಂಡಿಸಿದ ಎಸ್‌ಜಿ ಮೆಹ್ತಾ ಅವರಿಗೆ, ಯುಜಿಸಿ ಮಾರ್ಗಸೂಚಿಗಳು, ವಿಪತ್ತು ನಿರ್ವಹಣಾ ಕಾಯ್ದೆಯ ನಿಯಮಗಳ ವಿರುದ್ಧ ಹೋಗಲ್ಲ ಎಂಬುದನ್ನು ಸ್ಪಷ್ಟಪಡಿಸುವಂತೆ ತಿಳಿಸಲಾಗಿದೆ. ಆಗಸ್ಟ್ 14 ರಂದು ಮುಂದಿನ ವಿಚಾರಣೆ ನಡೆಸಲಾಗುವುದೆಂದು ನ್ಯಾಯಾಲಯ ಆದೇಶಿಸಿದೆ.

ಇಂದಿನ ಹೈಲೈಟ್‌ಸ್

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಪ್ರಾರಂಭ – ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪರವಾಗಿ, ಮಹಾರಾಷ್ಟ್ರ ರಾಜ್ಯದ ಪರ ಅಡ್ವೋಕೇಟ್ ಅಲೋಕ್ ಶ್ರೀವಾಸ್ತವ ಮತ್ತು ಹಿರಿಯ ವಕೀಲ ಶ್ಯಾಮ್ ದಿವಾನ್ – ಈ ಎಲ್ಲರೂ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುವ ಯುಜಿಸಿಯ ನಿರ್ಧಾರವನ್ನು ಅರ್ಜಿಗಳು ಪ್ರಶ್ನಿಸಿದ್ದಾರೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ನಲ್ಲಿ ಯುಜಿಸಿಯನ್ನು ಪ್ರತಿನಿಧಿಸುತ್ತಿದ್ದಾರೆ. ಮಹಾರಾಷ್ಟ್ರ ಮತ್ತು ದೆಹಲಿ ಸರ್ಕಾರಗಳ ಉತ್ತರಗಳನ್ನು ಪ್ರಶ್ನಿಸಿದ ಎಸ್‌ಸಿ ಮೆಹ್ತಾ, ಯುಜಿಸಿಯು ಪರೀಕ್ಷೆ ನಡೆಸಿಯೇ ಪದವಿ ನೀಡಬೇಕೆಂದು ನಿರ್ಧರಿಸಿದೆ.

“ಪದವಿಗಳನ್ನು ನೀಡುವ ಏಕೈಕ ಆಯೋಗ ಯುಜಿಸಿ ಮತ್ತು ಯಾವುದೇ ರಾಜ್ಯಗಳು ಪರೀಕ್ಷೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ” -ಎಸ್‌.ಜಿ ತುಷಾರ್ ಮೆಹ್ತಾ

ಬಳಿಕ ಎಸ್‌ಜಿ ಮೆಹ್ತಾ, ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್‌ಗಳಿಗೆ ಉತ್ತರ ಸಲ್ಲಿಸಲು ಸಮಯ ಕೋರಿದರು. ನಾಳೆಯೊಳಗೆ ಉತ್ತರವನ್ನು ಸಲ್ಲಿಸಬಹುದು ಎಂದು ಹೇಳಿದರು.

ಯುಜಿಸಿ ಮಾರ್ಗಸೂಚಿಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಅಡ್ವೊಕೇಟ್ ಅಲೋಕ್ ಶ್ರೀವಾಸ್ತವ್, ಅವರು ರಾಜ್ಯದ ಬಗ್ಗೆ ಕಾಳಜಿ ಅಲ್ಲ. ಬದಲಿಗೆ ಯುಜಿಸಿ ಮಾರ್ಗಸೂಚಿಗಳನ್ನು ವಿರೋಧಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯ ಸಲ್ಲಿಸಿದ ಅಫಿಡವಿಟ್‌ಗಳಿಗೆ ಉತ್ತರಿಸಲು ಮೆಹ್ತಾ ಅವರಿಗೆ ಅನುಮತಿ ನೀಡಿರುವ ನ್ಯಾಯಾಲಯ, ವಿಚಾರಣೆಗೆ ಆಗಸ್ಟ್ 14 ರ ದಿನಾಂಕವನ್ನು ನಿಗದಿಪಡಿಸಿದೆ

ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಓದುವುದನ್ನು ಮುಂದುವರಿಸಬೇಕು – ಎಸ್.ಜಿ.ಮೆಹ್ತಾ

ರಾಜ್ಯ ಸಲ್ಲಿಸಿದ ಅಫಿಡವಿಟ್‌ಗಳಿಗೆ ಉತ್ತರಿಸಲು ಮೆಹ್ತಾ ಅವರಿಗೆ ಅನುಮತಿ ನೀಡಿರುವ ನ್ಯಾಯಾಲಯ, ವಿಚಾರಣೆಗೆ ಆಗಸ್ಟ್ 14 ರ ದಿನಾಂಕವನ್ನು ನಿಗದಿಪಡಿಸಿದೆ.

1 COMMENT

LEAVE A REPLY

Please enter your comment!
Please enter your name here