ಯುಜಿಸಿ ಮಾರ್ಗಸೂಚಿ : ಉಚ್ಛ ನ್ಯಾಯಾಲಯದಲ್ಲಿ ಆಗಸ್ಟ್ 18ರಂದು ಮುಂದಿನ ವಿಚಾರಣೆ!

0
319
Tap to know MORE!

ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ನಡೆಸುವುದರ ಕುರಿತಾದ ಯುಜಿಸಿ ಮಾರ್ಗಸೂಚಿಗಳ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆದಿದೆ. ಆದರೆ ಉಚ್ಚ ನ್ಯಾಯಾಲಯವು ತನ್ನ ನಿರ್ಧಾರವನ್ನು ಇನ್ನೂ ಪ್ರಕಟಿಸಲಿಲ್ಲ. ಬದಲಿಗೆ, ವಿಚಾರಣೆನ್ನು ಆಗಸ್ಟ್ 18ಕ್ಕೆ ಮುಂದೂಡಿದೆ.

ಈ ದಿನದ ಹೈಲೈಟ್ಸ್

ಸಿಂಘ್ವಿ (ವಿದ್ಯಾರ್ಥಿಗಳ ಪರ ವಕೀಲರು)

 • ಅನೇಕ ವಿದ್ಯಾರ್ಥಿಗಳು ತಮ್ಮ ತವರಿಗೆ ಮರಳಿದ್ದಾರೆ.
 • ಅನೇಕ ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ್ದಾರೆ ಮತ್ತು ಈ ಸಮಯದಲ್ಲಿ ಪ್ರಯಾಣವು ಒಂದು ಪ್ರಮುಖ ವಿಷಯವಾಗಿದೆ.
 • ಬೋಧನೆಯ ನಂತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸಾಂಕ್ರಾಮಿಕದ ಭೀತಿಯಿಂದ ಶಾಲಾ – ಕಾಲೇಜುಗಳು ಬಂದ್ ಆಗಿದೆ. ಬೋಧನೆಗೂ ಅಡ್ಡಿಯಾಗಿದೆ.
 • ಮಾರ್ಚ್‌ನಿಂದಲೂ ಗೃಹ ಸಚಿವಾಲಯವು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಬೇಕು ಎಂದು ಒಂದು ಸ್ಥಿರ ನಿಲುವನ್ನು ಹೊಂದಿದೆ. ಆದರೆ ಈಗ ಇದ್ದಕ್ಕಿದ್ದಂತೆ , ಕೇವಲ ಪರೀಕ್ಷೆ ನಡೆಸಲು  ತೆರೆಯುವುದೆಂದರೆ??
 • ಎಲ್ಲಾ ಶೈಕ್ಷಣಿಕ ಚಟುವಟಿಕೆಗಳು, ಪಾಠಗಳು ಕಳೆದ ಐದು ತಿಂಗಳಿನಿಂದ ನಿಲ್ಲಿಸಲಾಗಿದೆ.
 • ಬೋಧನೆ ಮತ್ತು ಪರೀಕ್ಷೆಯ ನಡುವೆ ನೇರ ಸಂಬಂಧವಿದೆ. ಭೋಧನೆ ಇಲ್ಲದೆ ಪರೀಕ್ಷೆ ಅಸಾಧ್ಯ!
 • ನಾವು ಪರೀಕ್ಷೆಯನ್ನು ವಿರೋಧಿಸುತ್ತಿಲ್ಲ. ಆದರೆ, ಸಾಂಕ್ರಾಮಿಕ ರೋಗದಿಂದಾಗಿ ಈ ವಿರೋಧಿಸುತ್ತಿದ್ದೇವೆ.
 • ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‌ಡಿಎಂಎ) ಎಲ್ಲದಕ್ಕೂ ಮತ್ತು ಪ್ರತಿ ಜಿಲ್ಲೆಯಲ್ಲೂ ಅನ್ವಯಿಸುತ್ತದೆ.
 • ಎನ್‌ಡಿಎಂಎ ಕಾರಣ ನ್ಯಾಯಾಲಯಗಳನ್ನೂ ಸಹ  ಮುಚ್ಚಲಾಗಿದೆ.
 • ಪ್ರಯಾಣ ನನ್ನ ಹಕ್ಕು, ಆಸ್ತಿ ನನ್ನ ಹಕ್ಕು, 21 ನೇ ಪರಿಚ್ಛೇದದ ಅಡಿಯಲ್ಲಿ ನನಗೆ ಅನೇಕ ಹಕ್ಕುಗಳಿವೆ. ಆದರೆ ಈ ಹಕ್ಕುಗಳನ್ನು ಮೊಟಕುಗೊಳಿಸಲು ನನ್ನ ಪ್ರಜಾಪ್ರಭುತ್ವ ಏಕೆ ಅವಕಾಶ ನೀಡಿತು?
 • ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಎಲ್ಲ ಕ್ಷೇತ್ರಗಳನ್ನು ಮುಚ್ಚಲಾಗಿದೆ.

ಶ್ಯಾಮ್ ದಿವಾನ್ (ವಿದ್ಯಾರ್ಥಿಗಳ ಪರ)

 • ಎಲ್ಲಾ ವರ್ಗದ ಜನರು ಏಕರೂಪದ ವರ್ಗ – ವಿದ್ಯಾರ್ಥಿಗಳು,ಇನ್ವಿಜಿಲೇಟರ್‌ಗಳು, ವಿದ್ಯಾರ್ಥಿಗಳೊಂದಿಗೆ ವಾಸಿಸುವ ಜನರು ಎಲ್ಲರೂ ಏಕರೂಪದ ವರ್ಗ
 • ಸ್ಥಳೀಯ ಪರಿಸ್ಥಿತಿಗಳ ಆಧಾರದ ಮೇಲೆ, ವಿಶ್ವವಿದ್ಯಾಲಯಗಳು ಸ್ಥಳೀಯ ಮಟ್ಟದಲ್ಲಿ ಪರೀಕ್ಷೆಯ ಬಗ್ಗೆ ಯೋಚಿಸಬೇಕಾಗುತ್ತದೆ.
 • ಅನೇಕ ವಿದ್ಯಾರ್ಥಿಗಳು ಈಗಾಗಲೇ, ಬೇರೆ ಕಾಲೇಜಿನಲ್ಲಿ ತಮ್ಮ ಉನ್ನತ ಶಿಕ್ಷಣಕ್ಕಾಗಿ ಪ್ರವೇಶವನ್ನು ಪಡೆದುಕೊಂಡಿದ್ದಾರೆ ಮತ್ತು ಕೆಲವರು ಉದ್ಯೋಗ ಇತ್ಯಾದಿಗಳನ್ನು ಪಡೆದುಕೊಂಡಿದ್ದಾರೆ.
 • ಅನೇಕ ರಾಜ್ಯಗಳಲ್ಲಿ ಕೆಲವು ಹಾಸ್ಟೆಲ್‌ಗಳು ತಾತ್ಕಾಲಿಕವಾಗಿ ಕ್ವಾರಂಟೈನ್ ಕೇಂದ್ರಗಳಾಗಿ ಬಳಸಲಾಗಿದೆ.
 • ಮಾರ್ಗಸೂಚಿಯಲ್ಲಿ ಆರೋಗ್ಯದ ಬಗ್ಗೆ ಅಥವಾ ಪರಿಸ್ಥಿತಿಯ ಸುಧಾರಣೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ (COVID 19 ಗೆ ಸಂಬಂಧಿಸಿದಂತೆ)
 • ಸಾಮಾನ್ಯ ಕಾಲದಲ್ಲಿ, ಅವರು ಪರೀಕ್ಷೆ ನಡೆಸಬಹುದು ಮತ್ತು ದಿನಾಂಕವನ್ನು ಹಾಕಬಹುದು. ಆದರೆ ಇಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಗಣಿಸಲಿಲ್ಲ
 • ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖ
  • ಸೆಕ್ಷನ್ 6 –  ವಿಪತ್ತು ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆಗಾಗಿ, ಹರಡುವಿಕೆಯನ್ನು ತಡೆಗಟ್ಟಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು.

 • ಭಾರತದಲ್ಲಿ ದೃಢಪಡಿಸಿದ ಪ್ರಕರಣಗಳು ಸಾವಿರಾರು ಸಂಖ್ಯೆಯಲ್ಲಿರುವಾಗ ಪರೀಕ್ಷೆಗಳನ್ನು ನಡೆಸಲು ಅನುಮತಿಸಲಾಗದಿದ್ದಾಗ, ಲಕ್ಷಾಂತರ ಪ್ರಕರಣಗಳು ಮತ್ತು ಸೋಂಕಿನ ತೀವ್ರತೆಯು ಹೆಚ್ಚಾಗುತ್ತಿರುವಾಗ ಅವುಗಳನ್ನು ಈಗ ಹೇಗೆ ನಡೆಸಲು ಅನುಮತಿಸಬಹುದು?

ಅಂತಿಮವಾಗಿ ಉಚ್ಚ ನ್ಯಾಯಾಲಯವು, ಯಾವುದೇ ಮಧ್ಯಂತರ ತೀರ್ಪನ್ನು ನೀಡದೆ, ಮುಂದಿನ ವಿಚಾರಣೆಯ ದಿನಾಂಕವನ್ನು ಪ್ರಕಟಿಸಿತು.

 

LEAVE A REPLY

Please enter your comment!
Please enter your name here