ಯುಪಿಎಸ್‌ಸಿ: ಜಯದೇವ್ ಸಿ.ಎಸ್ ರಾಜ್ಯಕ್ಕೆ ಟಾಪರ್ – ರಾಜ್ಯದ 42 ಅಭ್ಯರ್ಥಿಗಳು ತೇರ್ಗಡೆ

1
234
Tap to know MORE!

2019ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪ್ರದೀಪ್ ಸಿಂಗ್ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದರೆ, ಜಯದೇವ ಸಿ.ಎಸ್ ಕರ್ನಾಟಕದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಬೆಂಗಳೂರಿನ ಜಯದೇವ ರಾಷ್ಟ್ರಕ್ಕೆ 5 ನೇ ಸ್ಥಾನವನ್ನು ಪಡೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಿ. ಯಶಸ್ವಿನಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದು, ದೇಶದಲ್ಲಿ 71ನೇ ಸ್ಥಾನ ಪಡೆದಿದ್ದಾರೆ.

“ನಾನು ಯಾವಾಗಲೂ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಲು ಬಯಸುತ್ತೇನೆ. ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪದವಿ ದಿನಗಳಲ್ಲಿ, ಕಾನೂನು ಮತ್ತು ಆಡಳಿತವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಅದೃಷ್ಟ ನನ್ನದಾಗಿತ್ತು. ಕಾನೂನು ಶಾಲೆಯಲ್ಲಿ ಪದವೀಧರರು ನಾಗರಿಕ ಸೇವೆಗಳಿಗೆ ಪ್ರವೇಶಿಸಿದ ಇತಿಹಾಸವೂ ಇತ್ತು, ಆದ್ದರಿಂದ ಅದು ಸ್ಪೂರ್ತಿದಾಯಕವಾಗಿದೆ” ಎಂದು ರಾಜ್ಯದ ಟಾಪರ್ ಜಯದೇವ ಹೇಳಿದ್ದಾರೆ.

ದ್ವಿತೀಯ ಸ್ಥಾನಿ ಯಶಸ್ವಿನಿ, ಕಳೆದ ಬಾರಿಯೂ ಯುಪಿಎಸ್ ಸಿ ಪರೀಕ್ಷೆ ಎದುರಿಸಿದ್ದ ಯಶಸ್ವಿನಿ 293ನೇ ಶ್ರೇಣಿ ಪಡೆದಿದ್ದರು. ಐಎಎಸ್ ಅಧಿಕಾರಿ ಆಗಬೇಕೆನ್ನುವುದು ಅವರ ಬಯಕೆ-ಕನಸು. ಆ ನಿಟ್ಟಿನಲ್ಲಿ ಕಳೆದ ಬಾರಿ 293ನೇ ಶ್ರೇಣಿ ಪಡೆದರೂ ಅದು ಕಡಿಮೆ ಎನ್ನಿಸಿ, ಮತ್ತೆ ಪರೀಕ್ಷೆ ಎದುರಿಸಿ ಈ ಬಾರಿ 71 ಶ್ರೇಣಿ ಪಡೆದಿದ್ದಾರೆ.

ಐಎಎಸ್ ಮಾಡಬೇಕೆನ್ನುವ ನನ್ನ ಗುರಿಗೆ ಸದಾ ಬೆನ್ನೆಲುಬಾಗಿ ನಿಂತ ನನ್ನ ತಂದೆ ಬಸವರಾಜಪ್ಪ ಮತ್ತು ತಾಯಿ ಇಂದಿರಾ ಹಾಗೂ ನಾನು ಓದಿದ ಶಾಲೆಯ ಶಿಕ್ಷಕರ ಮಾರ್ಗದರ್ಶನದಿಂದ ನನಗೆ ಈ ಸ್ಥಾನ ಸಿಕ್ಕಿದೆ. ಜನರ ಸೇವೆ ಮಾಡಬೇಕೆನ್ನುವ ನನ್ನ ಕನಸಿಗೆ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಯಶಸ್ವಿನಿ ಕೃತಜ್ಞತೆ ಸಲ್ಲಿಸಿದ್ದಾರೆ.

ಇವರನ್ನು ಸೇರಿದಂತೆ, ರಾಜ್ಯದ 42 ಅಭ್ಯರ್ಥಿಗಳು ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ಹೆಸರು ಮತ್ತು ಪಡೆದ ಶ್ರೇಣಿ ಈ ಕೆಳಗಿನಂತಿದೆ :

 1. – ಜಯದೇವ ಸಿ.ಎಸ್: 5
 2. – ಬಿ. ಯಶಸ್ವಿನಿ: 71
 3. – ಎಚ್.ವಿನೋದ್ ಪಾಟೀಲ್ : 132
 4. – ಹೆಚ್.ಎಸ್.ಕೀರ್ತಾನಾ: 167
 5. – ಸಚಿನ್ ಹಿರೇಮಠ: 213
 6. – ಹೇಮಾ ನಾಯ್ಕ್: 225
 7. – ಎಂ.ಜೆ ಅಭಿಷೇಕ್ ಗೌಡ: 278
 8. – ಬಿ.ಕೀರ್ತಿ : 297
 9. – ವೆಂಕಟ್ ಕೃಷ್ಣ: 336
 10. – ಹೆಚ್.ಎನ್. ಮಿಥುನ್ : 359
 11. – ವೆಂಕಟರಮಣ ಕವಡಿಕೇರಿ: 364
 12. – ಹೆಚ್.ಆರ್. ಕೌಶಿಕ್ : 380
 13. – ಬಿ.ಆರ್. ವರುಣ : 395
 14. – ಆರ್. ಮಂಜುನಾಥ : 406
 15. – ಬಿ.ಸಿ. ಹರೀಶ್ : 409
 16. – ಯತೀಶ್ ಆರ್ : 419
 17. – ಜಗದೀಶ್ ಅಡಹಳ್ಳಿ: 440
 18. – ಸ್ಪರ್ಶ ನೀಲಗಿ : 443
 19. – ಎಚ್.ಬಿ. ವಿವೇಕ್ : 444
 20. – ಆನಂದ್ ಕಲ್ಲದಗಿ : 446
 21. – ಮೊಹಮ್ಮದ್ ನದಿಮುದ್ದೀನ್ : 461
 22. – ಕೆ.ಟಿ ಮೇಘನಾ : 465
 23. – ಸೈಯದ್ ಜಾವೇದ್ ಅಲಿ : 476
 24. – ಎನ್. ವಿವೇಕ್ ರೆಡ್ಡಿ: 485
 25. – ಎನ್.ಹೇಮಂತ್ : 498
 26. – ಖಮರುದ್ದೀನ್ : 511
 27. – ವರುಣ ಕೆ.ಗೌಡ : 528
 28. – ಪ್ರಪುಲ್ ದೇಸಾಯಿ : 532
 29. – ಎನ್ .ರಾಘವೇಂದ್ರ: 536
 30. – ಕೆ. ಆರ್. ಭರತ್ : 545
 31. – ಪೃಥ್ವಿ ಎಸ್.ಹುಲ್ಲತ್ತಿ: 582
 32. – ಬಿ.ಸುಭಾಷ್ : 583
 33. – ಅಭಿನಾಷ್ ಸಶಿಕಾಂತ್ ಬಡ್ಡೂರ : 591
 34. – ದರ್ಶನ ಕುಮಾರ್ ಹೆಚ್ ಜಿ : 594
 35. – ಪ್ರಿಯಾಂಕಾ ಕಾಂಬ್ಳೆ : 617
 36. – ಸವಿತಾ ಗೋಟ್ಯಾಳ: 626
 37. – ಪ್ರಜ್ವಲ್ : 636
 38. – ರಮೇಶ್ : 646
 39. – ಗಜಾನನ ಬಾಲೆ : 663
 40. – ಎಂ.ಎಂ. ಚೈತ್ರಾ : 713
 41. – ಜಿ.ಎಸ್. ಚಂದನ್ : 777
 42. – ಎ.ಪಿ.ಮಂಜೇಶ್ ಕುಮಾರ್: 800

1 COMMENT

LEAVE A REPLY

Please enter your comment!
Please enter your name here