ನಾಗರಿಕ ಸೇವಾ ಪರೀಕ್ಷೆ 2019 ರ ಅಂತಿಮ ಫಲಿತಾಂಶ ಪ್ರಕಟ

0
141
Tap to know MORE!

ನಾಗರಿಕ ಸೇವಾ ಪರೀಕ್ಷೆಗಳ 2019 ರ ಅಂತಿಮ ಫಲಿತಾಂಶವನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಮಂಗಳವಾರ ಪ್ರಕಟಿಸಿದ್ದು, 829 ಆಕಾಂಕ್ಷಿಗಳು ಉತ್ತಿರ್ಣರಾಗಿದ್ದಾರೆ.

ನಾಗರಿಕ ಸೇವೆಗಳ ಲಿಖಿತ ಪರೀಕ್ಷೆಯು 2019ರ ಸೆಪ್ಟೆಂಬರ್ ನಲ್ಲಿ ನಡೆದಿತ್ತು. 2020 ರ ಫೆಬ್ರವರಿ ಮತ್ತು ಆಗಸ್ಟ್ ನಡುವೆ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳು ನಡೆದವು ಎಂದು ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ ತಿಳಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಿ ಸೇವೆ (ಐಎಫ್‌ಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಇತರ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ.

ಪ್ರದೀಪ್ ಸಿಂಗ್ ಪ್ರಥಮ ರ್ಯಾಂಕ್ ಪಡೆದರೆ, ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ ನಂತರದ ಸ್ಥಾನದಲ್ಲಿದ್ದಾರೆ.

ಅಂತಿಮ ಫಲಿತಾಂಶವು ಯುಪಿಎಸ್‌ಸಿಯ ಅಧಿಕೃತ ಜಾಲತಾಣದಲ್ಲಿ ಲಭ್ಯ.

ಆಯ್ಕೆಯಾದ 829 ಜನರಲ್ಲಿ 304 ಮಂದಿ ಸಾಮಾನ್ಯ ವರ್ಗ, ಮತ್ತು 78 ಮಂದಿ ಆರ್ಥಿಕವಾಗಿ ಹಿಂದುಳಿದ ವರ್ಗದವರು, 251 ಮಂದಿ ಇತರ ಹಿಂದುಳಿದ ವರ್ಗದವರು (ಒಬಿಸಿ), 129 ಪರಿಶಿಷ್ಟ ಜಾತಿ ಮತ್ತು 67 ಮಂದಿ ಪರಿಶಿಷ್ಟ ಪಂಗಡದವರಿದ್ದಾರೆ.

LEAVE A REPLY

Please enter your comment!
Please enter your name here