ರಾತ್ರಿ – ಕಳೆದು ಬೆಳಗಾಗುವಷ್ಟರಲ್ಲಿ ಜನಪ್ರಿಯತೆ ಪಡೆದ “ಸರಪಕರೈಬ್” ಹುಡುಗ ಯಾರು ಗೊತ್ತಾ??

0
530
Tap to know MORE!

ಮಂಗಳೂರು : ಕರಾವಳಿಯ ಬಾಲಕನೊಬ್ಬ ಸಡನ್ ಆಗಿ ಟ್ರೆಂಡ್ ಆಗಿದ್ದಾನೆ. ನಗರದ ತೊಕ್ಕೊಟ್ಟುವಿನ ಮುಹಮ್ಮದ್ ಸಿದ್ದೀಕ್ ಮತ್ತು ನೂರ್ಜಹಾನ್ ದಂಪತಿಯ ಪುತ್ರ ಅಬ್ದುರ್ರಹ್ಮಾನ್ ಫೇಮಸ್ ಆಗಿರುವ ಹುಡುಗ

ಬಬ್ಬುಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿರುವ ಈತ ಯೂಟ್ಯೂಬ್ ಚಾನೆಲ್ ಪ್ರಚಾರಕ್ಕೆ ಮಾಡಿದ್ದ ವೀಡಿಯೊಂದರಲ್ಲಿ ಚಾನೆಲ್ ಸಬ್ಸ್ಕ್ರೈಬ್ ಮಾಡುವಂತೆ ಹೇಳಲು ಹೋಗಿ ಉಚ್ಚಾರ ಸರಿಯಾಗದೆ ತಡಕಾಡಿದ ವೀಡಿಯೊದ ವೈರಲ್ ಆಗಿದೆ.

ಇದೆ ವಿಚಾರಕ್ಕೆ ಈ ಬಾಲಕ ಹೆಚ್ಚಿನ ಜನರನ್ನು ತಲುಪಿದ್ದಾನೆ. 30 ಸೆಕೆಂಡ್ ನ ಈ ವೀಡಿಯೊವನ್ನು 35 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.

ಈ ವೀಡಿಯೊ ಸೆಲೆಬ್ರಿಟಿಗಳ ಗಮನ ಸೆಳೆದಿದ್ದು, ಬಹುಭಾಷಾ ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್ ವೀಡಿಯೊಗೆ ಕಮೆಂಟ್ ಹಾಕಿದ್ದಾರೆ.
ಕಾಮಿಡಿಯನ್ ಆಶಿಶ್ ಚಂಚ್ಲಾನಿ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಹಲವರು ಜನರು ಈ ವೀಡಿಯೊವನ್ನು ಮೊಬೈಲ್ ಸ್ಟೇಟಸ್, ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ

LEAVE A REPLY

Please enter your comment!
Please enter your name here