ಐಪಿಎಲ್ 2020 ಪ್ರಾಯೋಜಕತ್ವದಿಂದ ಹಿಂದೆ ಸರಿದ ವೀವೋ!

0
103

ಇಂದು ಸಂಜೆ ನಡೆದ ಹಠಾತ್ ಬೆಳವಣಿಗೆಯಲ್ಲಿ, ಚೀನಾದ ಹ್ಯಾಂಡ್‌ಸೆಟ್ ಕಂಪನಿ ವಿವೊ, ಈ ವರ್ಷದ ಐಪಿಎಲ್ ಪ್ರಾಯೋಜಕತ್ವ ಒಪ್ಪಂದದಿಂದ ಹೊರಬಂದಿದೆ.

ಆದರೆ ‘ವಿವೋ’ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗಿನ ಅವರ ಪ್ರಾಯೋಜಕತ್ವದ ಒಪ್ಪಂದವನ್ನು ಕೊನೆಗೊಳಿಸಿಲ್ಲ. ಬಿಸಿಸಿಐ ಬಯಸಿದರೆ, 2021 ರಲ್ಲಿ ಮರಳಿ ಪ್ರಾಯೋಜಕತ್ವವನ್ನು ಮಾಡುವುದಾಗಿ ಹೇಳಿಕೊಂಡಿದೆ

ಬಿಸಿಸಿಐ ಶೀಘ್ರದಲ್ಲೇ ಸ್ವತಂತ್ರ ಪ್ರಾಯೋಜಕರನ್ನು ಪ್ರಕಟಿಸುವ ನಿರೀಕ್ಷೆಯಿದೆ.

ವೀವೋ ಐಪಿಎಲ್ 2020 ರ ಪ್ರಾಯೋಜಕರಾಗಿ ಹೊರಗುಳಿದಿರುವುದು, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟಕ್ಕೆ ದೊಡ್ಡ ಜಯವಾಗಿದೆ ಎಂದು ಅದರ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ಸಿಎಐಟಿಯು ಚೀನಾದ ಉತ್ಪಾದಕರ ವಿರುದ್ಧ ಹಾಕಿದ ಒತ್ತಡವು, ಟಿ 20 ಪಂದ್ಯಾವಳಿಯಿಂದ ವೀವೋ ಕಂಪನಿ ಹೊರಗುಳಿಯುವಂತೆ ಮಾಡಿದೆ ಎಂದು ಖಂಡೇಲ್ವಾಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here