FLASH| ಭಾರತ Vs ನ್ಯೂಜಿಲೆಂಡ್ WTC ಫೈನಲ್ಸ್ : ಮೊದಲ ದಿನದಾಟ ರದ್ದು

0
83
Tap to know MORE!

ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ (WTC) ಫೈನಲ್ ಪಂದ್ಯವನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇಂದು (ಜೂನ್ 18) ಆರಂಭಿಸಬೇಕಿತ್ತು. ಆದರೆ, ಬಹಳ ಕುತೂಹಲ ಮೂಡಿಸಿದ್ದ ಆಟಕ್ಕೆ ಮೊದಲ ದಿನವೇ ವರುಣ ಅಡ್ಡಿಪಡಿಸಿದ್ದಾನೆ. ಟಾಸ್​ಗೂ ಮೊದಲೇ, ಮೊದಲ ಸೆಷನ್ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳುವಂತಾಗಿತ್ತು. 2.30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಮಳೆಯ ಕಾರಣದಿಂದ ಆರಂಭವು ತಡವಾಯ್ತು.

ಇದೀಗ, ಇನ್ನೂ ಮಳೆ ಕಡಿಮೆ ಆಗಿರದ ಕಾರಣ ಮೊದಲ ದಿನದಾಟವನ್ನೇ ರದ್ದುಗೊಳಿಸಲಾಗಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ನಾಯಕರಾಗಿ ತಮ್ಮ ಮೊದಲ ಐಸಿಸಿ ಟ್ರೋಫಿ ಆಡುತ್ತಿದ್ದಾರೆ. ಆದರೆ, ಸೌತಾಂಪ್ಟನ್​ನ ಹವಾಮಾನ ಆಡಲು ಅವಕಾಶ ಮಾಡಿಕೊಡುತ್ತಿಲ್ಲ. ಹವಾಮಾನ ವರದಿ ನೋಡಿದರೂ ಪಂದ್ಯಕ್ಕೆ ಸೂಕ್ತ ಅವಕಾಶ ಮಾಡಿಕೊಡುವಂತೆ ಕಾಣಿಸುತ್ತಿಲ್ಲ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಮುಂದೇನಾಗುತ್ತೆ ಎಂದು ಕಾದು ನೋಡಬೇಕಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here