ಯೂಟ್ಯೂಬರ್ ಜೊತೆ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ನಿಶ್ಚಿತಾರ್ಥ!

0
138

ಭಾರತೀಯ ಕ್ರಿಕೆಟ್ ನ ರಾಷ್ಟ್ರೀಯ ತಂಡದ ಆಟಗಾರ, ಯುಜ್ವೇಂದ್ರ ಚಾಹಲ್ ಯೂಟ್ಯೂಬರ್ ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಕುರಿತಂತೆ, ನರ್ತಕಿ-ನೃತ್ಯ ಸಂಯೋಜಕಿ ಧನಶ್ರೀ, ಇನ್ಸ್ಟಾಗ್ರಾಂ ನಲ್ಲಿ  ಸುದ್ದಿ ಹಂಚಿಕೊಂಡರು.

ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ಅವರ ಕುಟುಂಬ ಸದಸ್ಯರೊಂದಿಗೆ (ಫೋಟೋ: ಧನಶ್ರೀ ಇನ್‌ಸ್ಟಾಗ್ರಾಂ / ಇನ್‌ಸ್ಟಾಗ್ರಾಮ್)

ನಿಶ್ಚಿತ ವರ ಯುಜ್ವೇಂದ್ರ ಅವರೊಂದಿಗೆ  ಚಿತ್ರಗಳನ್ನು ಹಂಚಿಕೊಳ್ಳುತ್ತಾ, ಧನಶ್ರೀ, “ನಾವು ನಮ್ಮ ಕುಟುಂಬದೊಂದಿಗೆ “ ಹೌದು ”ಎಂದು ಹೇಳಿದ್ದೇವೆ” ಎಂದು ಕ್ಯಾಪ್ಷನ್ ಹಾಕಿದ್ದಾರೆ.

ವರ್ಮಾ ಮತ್ತು ಚಾಹಲ್ ಸುದ್ದಿ ಘೋಷಿಸಿದಾಗಿನಿಂದಲೂ, ಅವರು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಆತ್ಮೀಯ ಶುಭಾಶಯಗಳನ್ನು ಸ್ವೀಕರಿಸುತ್ತಿದ್ದಾರೆ.

“ಇದು ಬಹಳ ಅಚ್ಚರಿಯ ಸಂಗತಿಯಾಗಿದೆ” ಎಂದು ಹಲವರು ಹೇಳಿಕೊಂಡಿದ್ದಾರೆ.

ಯೂಟ್ಯೂಬರ್ ಆಗಿರುವ ಧನಶ್ರೀ ಅವರ ಚಾನೆಲ್‌ನಲ್ಲಿ 1.5 ಮಿಲಿಯನ್‌ಗಿಂತಲೂ ಹೆಚ್ಚು ಸಬ್‌ಸ್ಕ್ರೈಬರ್‌ಸ್ ಇದ್ದಾರೆ! ಅವರ ಯೂಟ್ಯೂಬ್ ಚಾನೆಲ್ ಲಿಂಕ್ ಇಲ್ಲಿದೆ ನೋಡಿ – ಧನಶ್ರೀ ವರ್ಮ

LEAVE A REPLY

Please enter your comment!
Please enter your name here